Monthly Archives: October 2015

ಗುರುನಿವೇದನೆ

boat

ಗುರುನಿವೇದನೆ
ಧೈರ್ಯವ ನೀಡಿ ಮುನ್ನೆಡೆಸು ಓ ಗುರುದೇವ
ಜಲಧಿ ಜಲಮಿ೦ದಿಗೆ
ಕರೆವರು ಗೆಳೆಯರು ನೀರಾಟಕೆ
ನೀರಜೀವಿಯು ಕರೆವುದು
ತನ್ನ ಮಿತ್ರನ ಸಾ೦ಗತ್ಯಕೆ
ಸಾಹಸಿಗ ಮಿತ್ರರು ಕರೆವರು ಸಾಹಸಕೆ
ಕಡಲ ಪಕ್ಷಿಯು ಕೂಗುವುದು
ತನ್ನ ಮೇಲೆರಿ ಪಯಣವ ಮಾಡಲು
ದೋಣಿಗ ಕರೆವನು ತನ್ನ ವ್ಯಾಪರಕೆ
ಅಳೆಯು ಕರೆವುದು ನೀರಿಗಿಳಿಯಲು

ಧೈರ್ಯವ ನೀಡಿ ಮುನ್ನಡೆಸು ಓ ಗುರುದೇವ
ಜಲಧಿ ಜಲಮಿ೦ದಿಗೆ
ಹುಡುಗಾಟಕೆಯ ಗೆಳೆಯರಿರುವರೆ೦ಬ ಭಯ
ನೀರಜೀವಿಯ ಕ೦ಡೆನಗೆ ಭಯ
ಸಾಹಸಿಗನ ಸಾಹಸ ನೋಡಿ ಭಯ
ಕಡಲಪಕ್ಷಿಯು ಮುಲುಗಿಸುವುದೆ೦ಬ ಭಯ
ಅಳೆಯ ರಭಸಕೆ ಬೀಳುವ ಭಯ
ಎಲ್ಲ ಭಯವ ನೀಗಿಸಲು
ನನ್ನ ಗುರುದೇವನಿರುವನೆ೦ಬ ನ೦ಬಿಕೆ

Advertisements

ಪ್ರೀತಿಯಿ೦ದ “ಜಕ್ಕಣ್ಣ” ಎ೦ದು ಕರೆಸಿಕೊಳ್ಳುವ ಟಾಲಿವುಡ್ ಚಿತ್ರ ನಿರ್ದೇಶಕ

raajaಇವರ ಹೆಸರು ಎಸ್. ಎಸ್ .ರಾಜಮೌಳಿ ( ಕೊಡುರೂ ಶ್ರೀಶೈಲ ಶ್ರೀ ರಾಜಮೌಳಿ). ಜಕ್ಕಣಾಚಾರ್ಯರು ಅದ್ಬುತವಾಗಿ ಶಿಲ್ಪಗಳನ್ನು ಕೆತ್ತಿದರೆ.ಈ ಅಧುನಿಕ ಜಕ್ಕಣಾಚಾರ್ಯರು ಅದ್ಬುತವಾಗಿ ಚಿತ್ರಗಳನ್ನು ನಿರ್ಮಿಸುತ್ತಾರೆ.
ಟಾಲಿವುಡ್ ನಲ್ಲಿ ಇವರನ್ನು ಪ್ರೀತಿಯಿ೦ದ ” ಜಕ್ಕಣ್ಣ” ಎ೦ದು ಕರೆಯುತ್ತಾರೆ. ಭಾರತ ಚಿತ್ರರ೦ಗವನ್ನು ವಿಶ್ವಮಟ್ಟಕ್ಕೆ ಎತ್ತರಿಸಿದ ನಿರ್ದೇಶಕರು. ಇವರ ಎಲ್ಲ ಚಿತ್ರಗಳು ಬ್ಲಾಕ್ ಬಾಷ್ಟರ್ ಹಿಟ್ಟುಗಳೆ.ಇವರು ಟಾಲಿವುಡ್ ನಲ್ಲೆ ಅತಿ ಹೆಚ್ಚು ಬೇಡಿಕೆಯ ಹಾಗೂ ಜನಪ್ರಿಯ ನಿರ್ದೇಶಕರು.ಇವರ ಎಲ್ಲ ಚಿತ್ರಗಳು ಭಾರತೀಯ ಭಾಷೆಗಳಾದ ತಮಿಲು, ಬೋಜ್ ಪುರಿ, ಕನ್ನಡ, ಮಲಿಯಾಲ೦, ಹಿ೦ದಿ ಭಾಷೆಗಳಿಗೆ ಅನುವಾದವಾಗಿವೆ.

ಇವರು ಇತ್ತಿಚಿನಲ್ಲಿ ನಿರ್ದೇಶಿಸಿದ ಸಿನಿಮಾ ಬಾಹುಬಲಿ.ಭಾರತದಲ್ಲಿ ಅಸ೦ಖ್ಯಾತ ಜನರು ಬಾಹುಬಲಿ ಗಾಗಿ ಕಾಯುತ್ತಿದ್ದಾರೆ. ಇದು ಬಹುನಿರಿಕ್ಷಿತ ಚಿತ್ರ ಎ೦ದು ಇದರಿ೦ದ ಗೊತ್ತಾಗುತ್ತದೆ.ಇದು ಬ್ಲಾಗ್ ಬಾಷ್ಟರ್ ಆಗೋದರಲ್ಲಿ ಅನುಮಾನವೇ ಇಲ್ಲ. ಈ ಚಿತ್ರ ನೂರು ಕೋಟಿಯ ಕ್ಲಬ್ ಗೆ ಸೇರುತ್ತದೆ. ಮೊನ್ನೆಯಷ್ಟೆ ಈ ಚಿತ್ರದ ಟೀಸರ್, ಟ್ರೈಲರ್, ಆಡಿಯೋ ರಿಲೀಸ್ ಆಯಿತು. ಈ ಚಿತ್ರದ ಹಾಡುಗಲೆಳ್ಳ ತು೦ಬಾ ಚೆನ್ನಾಗಿದೆ.

ಇವರಿಗೆ ಇವರ ತ೦ದೆ ಚಿತ್ರ ರಚನೆಯಲ್ಲಿ ಸಹಾಯ ಮಾಡುತ್ತಾರೆ. ಇವರ ತ೦ದೆಯೂ ಸಹ ಚಿತ್ರ ನಿರ್ದೇಶಕರೆ ಆಗಿದ್ದರೆ. ಇವರ ತ೦ದೆ ಕೆ.ವಿ ವಿಜಯೇ೦ದ್ರ ಪ್ರಸಾದ್ ಮತ್ತು ತಾಯಿ ರಾಜನ೦ದಿನಿ ರಾಜಮೌಳಿ. ರಾಜಮೌಳಿಯವರ ಹೆ೦ಡತಿ ರಮಾ ರಾಜಮೌಳಿ.ಇವರ ಅ೦ಕುಲ್ ಶಿವ ದತ್ತ ಚಿತ್ರ ನಿರ್ದೇಶಕರು. ಎ೦.ಎ೦. ಕೀರವಾಣಿ,ಕಲ್ಯಾಣಿ ಮಾಲಿಕ್,ಎಸ್.ಎಸ್.ನಾಗ,ಎಸ್.ಎಸ್.ಕ೦ಚಿ ಇವರ ಕಸಿನ್ಸ್.
ರಾಜಮೌಳಿ ಹುಟ್ಟಿದ್ದು ಕರ್ನಾಟಕದಲ್ಲಿ ಎ೦ಬುದು ನಮಗೆಲ್ಲ ಸ೦ತೋಷದ ವಿಷಯ. ಇವರು ಹುಟ್ಟಿದ್ದು ರಾಯಾಚೂರಿ ಅಮರೇಶ್ವರ ಕ್ಯಾ೦ಪ್ ನಲ್ಲಿ. ನಾಲ್ಕು ತರಗತಿಯವರೆಗೂ ಕೋವೂರಿನಲ್ಲಿ ಓದಿ ನ೦ತರ ಇ೦ಟರ್ ಮಿಡಿಯೆಟ ವರೆಗೆ ಎಲೂರಿನಲ್ಲಿ ಓದಿದರು. ಬಿ.ಎಸ್.ಸಿ ಪದವಿಯನ್ನು ಸರ್ .ಸಿ.ಆರ್.ಆರ್ ಕಾಲೇಜಿನಲ್ಲಿ ಪಡೆದರು.

ಇವರು ಬಾಲ್ಯ ನಟರು. ಚಿಕ್ಕವಯಸ್ಸಿನಲ್ಲಿ ಅವರ ತ೦ದೆ ನಿರ್ದೇಶಿದ ಚಿತ್ರದಲ್ಲಿ ಕೃಷ್ಣ ನ ಪಾತ್ರ ಮಾಡಿದ್ದರು.ಅವರ ತ೦ದೆಗೆ ಆರು ವರ್ಷಗಳ ಕಾಲ ಸಹಾಯಕ ನಿರ್ದೇಶಕರಾಗಿದ್ದರು. ಆಗ ತಮ್ಮ ಸ್ವ೦ತ ಕಥೆಗಳನ್ನು ಹಲವಾರು ನಿರ್ದೇಶಕರಿಗೆ ಹೇಳುತ್ತಿದ್ದರು. ತಮಿಲ್ ನ ಎ.ವಿ.ಎ೦ ಟಿಯಟರ್ ನಲ್ಲೂ ಕೆಲಸ ಮಾಡಿದ್ದಾರೆ. ಅವರ ಸ್ವ೦ತ ಪ್ರೋಡಕ್ಷನ್ ಹೌಸ ” ಅರ್ದಾ೦ಗಿ” ನಷ್ಟವಾಗ ಚೆನ್ನೈ ಬಿಟ್ಟು ಹೈದರಾಬಾದಿಗೆ ಬ೦ದರು.
ಹೈದರಾಬಾದ್ ಗೆ ಬ೦ದ ನ೦ತರ ಬಹುಪ್ರಖ್ಯಾತ ನಿರ್ದೇಶಕರಾದ ಕೆ.ರಾಘವೇ೦ದ್ರರಾವ್ ಅವರು ” ಈನಾಡು” ಟಿವಿ ಗೆ ” ಶಾ೦ತಿ ನಿವಾಸ೦ ” ಧಾರವಾಹಿಣಿ ನಿರ್ದೇಶಿಸುತ್ತಿದ್ದರು. ಕೆ.ರಾಘವೇ೦ದ್ರ ರಾವ್ ಅವರಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಇದಾದ ನ೦ತರ ತಮ್ಮದೆ ಆದ ಸ್ವ೦ತ ಸಿನಿಮಾಗೆ ನಿರ್ದೇಶನ ಮಾಡಿದರು. ಇವರ ಮೊದಲ ನಿರ್ದೇಶನದ ಸಿನೆಮಾ ಸ್ಟುಡೆ೦ಟ್ ನ೦.೧. ಇವರ ನಿರ್ದೇಶನ ವಿಷೇಶವೆ೦ದರೆ ಮೊದಲ ಸಿನಿಮಾದಿ೦ದ ಇಸುವರೆಗಿನ ಬಾಹುಬಲಿ ಸಿನಿಮಾ ವರೆಗೂ ಒಬ್ಬರೆ ಸ೦ಗೀತ ನಿರ್ದೇಶಕರು, ಸಿನೆಮಾದ ತಾ೦ತ್ರಿಕ ತ೦ಡ, ಸಾಹಸ ನಿರ್ದೇಶನ ಮತ್ತು ಇತರೆ ಕಲಾವಿದರು.

ನಿರ್ಮಾಣ ಕಾರ್ಮಿಕರು

dailw

ನಿರ್ಮಾಣ ಕಾರ್ಮಿಕರು
” ತಾಜ್ ಮಹಾಲ್ ನಿರ್ಮಾಣಕ್ಕೆ ಕಲ್ಲು ಎತ್ತಿಕೊಟ್ಟ ಕೂಲಿಗಾರರ್ಯಾಯು?”
ಎ೦ದು ಮಾತ್ರವಲ್ಲದೆ
” ನಿಮ್ಮ ಮಲಗುವ ಕೋಣೆಗೆ ಇಟ್ಟಗೆ ಎತ್ತಿಕೊಟ್ಟ ಹೆ೦ಗಸರ್ಯಾಯು?”
ಎ೦ದೂ ಈ ಮಾತನ್ನು ಆಲೋಚನೆ ಮಾಡಿ.

ಬಿಸಿಲಲ್ಲಿ, ಮಳೆಯಲ್ಲಿ, ಚಳಿಯಲ್ಲಿ,
ಧೂಳಲ್ಲಿ,ಹೋಗೆಯಲ್ಲಿ,ಗಾಳಿಯಲ್ಲಿ,
ಹಗಲು-ರಾತ್ರಿ ಎ೦ದೆನದೆ,
ನಿರ೦ತರ ಶ್ರಮಿಸುವ ಶ್ರಮವೀರರು ಅವರು.

ಆಕಾಶದ೦ತ ಎತ್ತರದಲ್ಲಿ,
ಭೂಮಿಯ ಒಳಗಡೆ,
ತೊ೦ದರೆಗೆ ಹೆದರದೆ, ಪ್ರಾಣಕ್ಕೆ ಅ೦ಜದೆ,
ಪ್ರತಿದಿನ ಬದುಕಿನ ಹೋರಾಟ ನಡೆಸುವ ಶ್ರಮವೀರರು ಅವರು.

ಊರಲ್ಲದ ಊರಲ್ಲಿ, ಬ೦ಧುಗಳಿ೦ದ ದೂರದಲ್ಲಿ,
ತನ್ನದಲ್ಲದ ಭಾಷೆಯಲ್ಲಿ, ಬೇರೆ ಪ್ರಾ೦ತದ ಊಟ ಉ೦ಡು,
ಸಾಲದ ಕೋಣೆಯಲ್ಲಿ ತ೦ಗಿ, ಕಡಿಮೆ ಖರ್ಚ ಮಾಡಿ,
ಮನೆಗೆ ಹಣ ಕಳಿಸುವುದೆ ಅವರ ಜೀವನದ ಗುರಿ.!

ಆ ನಿರ್ಮಣ ಕಾರ್ಮಿಕರ ಶ್ರಮ ಫಲಿತವೆ,
ನಮ್ಮ ಮನೆ,ಪ್ರ್ಲೆಒರ್ವರ್ಸ್,ಮೆಟ್ರೊಗಳು,ಮಾಲ್ ಗಳು, ಪ್ಯಾಕ್ಟರಿಸ್,ಎಲ್ಲಾನು,

ದೇಶದ ಜನತೆ, ನಾಯಕರು ಕನಸುಕಾಣುತ್ತಿರುವ,
ನವ ಭಾರತವನ್ನು ಕಟ್ಟುವ, ಚಿಕ್ಕ ಚಿಕ್ಕ ಬ್ರಹ್ಮ ದೇವರು ಅವರು.

ಅವರು ಆಚೆಕಡೆ, ಎಲ್ಲಗಾಲವು ಕಷ್ಟಪಟ್ಟರೆ,
ನಾವು ನಾಲ್ಕು ಗೋಡೆಗಳ ಮಧ್ಯೆ ಎಲ್ಲ ಕಾಲವೂ ಕ್ಷೆಮವಾಗಿ ಬದುಕುವುದು,
ಅವರ ಶ್ರಮದಿ೦ದ ನಮಗೆ ಸುಖವಾಗುತ್ತಿದೆ ಎ೦ದು ಗುರುತುಸಿ ಗೌರವಿಸಿ,

” ತಾಜ್ ಮಹಾಲ್ ನಿರ್ಮಾಣಕ್ಕೆ ಕಲ್ಲು ಎತ್ತಿಕೊಟ್ಟ ಕೂಲಿಗಾರರ್ಯಾಯು?”
ಎ೦ದು ಮಾತ್ರವಲ್ಲದೆ
” ನಿಮ್ಮ ಮಲಗುವ ಕೋಣೆಗೆ ಇಟ್ಟಗೆ ಎತ್ತಿಕೊಟ್ಟ ಹೆ೦ಗಸರ್ಯಾಯು?”
ಎ೦ದೂ ಈ ಮಾತನ್ನು ಆಲೋಚನೆ ಮಾಡಿ.