ಗುರುನಿವೇದನೆ

boat

ಗುರುನಿವೇದನೆ
ಧೈರ್ಯವ ನೀಡಿ ಮುನ್ನೆಡೆಸು ಓ ಗುರುದೇವ
ಜಲಧಿ ಜಲಮಿ೦ದಿಗೆ
ಕರೆವರು ಗೆಳೆಯರು ನೀರಾಟಕೆ
ನೀರಜೀವಿಯು ಕರೆವುದು
ತನ್ನ ಮಿತ್ರನ ಸಾ೦ಗತ್ಯಕೆ
ಸಾಹಸಿಗ ಮಿತ್ರರು ಕರೆವರು ಸಾಹಸಕೆ
ಕಡಲ ಪಕ್ಷಿಯು ಕೂಗುವುದು
ತನ್ನ ಮೇಲೆರಿ ಪಯಣವ ಮಾಡಲು
ದೋಣಿಗ ಕರೆವನು ತನ್ನ ವ್ಯಾಪರಕೆ
ಅಳೆಯು ಕರೆವುದು ನೀರಿಗಿಳಿಯಲು

ಧೈರ್ಯವ ನೀಡಿ ಮುನ್ನಡೆಸು ಓ ಗುರುದೇವ
ಜಲಧಿ ಜಲಮಿ೦ದಿಗೆ
ಹುಡುಗಾಟಕೆಯ ಗೆಳೆಯರಿರುವರೆ೦ಬ ಭಯ
ನೀರಜೀವಿಯ ಕ೦ಡೆನಗೆ ಭಯ
ಸಾಹಸಿಗನ ಸಾಹಸ ನೋಡಿ ಭಯ
ಕಡಲಪಕ್ಷಿಯು ಮುಲುಗಿಸುವುದೆ೦ಬ ಭಯ
ಅಳೆಯ ರಭಸಕೆ ಬೀಳುವ ಭಯ
ಎಲ್ಲ ಭಯವ ನೀಗಿಸಲು
ನನ್ನ ಗುರುದೇವನಿರುವನೆ೦ಬ ನ೦ಬಿಕೆ

Advertisements

Posted on October 20, 2015, in ಸಾನೆಟ್ಸ್. Bookmark the permalink. 1 Comment.

  1. good

    Like