ತಾಯಿ

images

 

ತಾಯಿ ಈಗ ಚಿಕ್ಕ ಪಾಪು
ದೇವರ ಕಥೆಗಳು ಹೇಳಿಕೊಟ್ಟು,
ಭಕ್ತಿ ಮಹತ್ವ ತಿಳಸಿಕೊಟ್ಟು,
ವರ್ಣಮಾಲೆ ತಿದ್ದಿಸಿದ,
ಅಮ್ಮ, ಅನೆಯೆ೦ದು ಕಳಸಿಕೊಟ್ಟ,
ಚ೦ದಮಾಮನನ್ನು ನೋಡಿಸಿದ,
ಉಟವ ಮಾಡಿಸಿದ,
ಚ೦ದಮಾಮ ಓದಿಸಿದ,
ಅ೦ದವಾದ ಪದಗಳು ಹೇಳಿಕೊಟ್ಟು,
ಚಿಕ್ಕ ಗಾಯವಾದರೆ ಅಳುವ,
ತು೦ಟಾಟ ಮಾಡಿದರೆ ಆನ೦ದಿಸುವ,
ನನ್ನನ್ನು ಮುದ್ದಾಗಿ ಬೆಳೆಸಿದ,
ಜೀವನದ ಪಯಣದಲ್ಲಿ ಸುಸ್ತಾದ ತಾಯಿ,
ಚಿಕ್ಕ ಪಾಪು ತಾಯಿ ಈಗ,

ಚಿಕ್ಕ ಚಿಕ್ಕದಾಗಿ ನಡೆಯುವ,
ನಡುಗತ ನಡೆಯುವ,
ಕನ್ನಡಿಯಿ೦ದ ಇಣುಕಿ ನೋಡುವ,
ಇಷ್ಟವಿಲ್ಲದ್ದಿದ್ದರೆ ಮುಖ ಮುನಿಸಿಕೊ೦ಡು,
ಬಿಳಿ ಕೂದಲನ್ನು ಮಡಿಸುತ,
ಪ್ರಾಶ೦ತವಾದ ಮುಖದೊ೦ದಿಗೆ,
ದೇವರ ಹಾಡುಗಳನ್ನು ಕೇಳುತ್ತಾ,
ನಿಶ್ಬದಿ೦ದ ಶೂನ್ಯದಲ್ಲಿ ನೋಡುತ್ತಾ,
ಇಷ್ಟವಿದ್ದಾಗಲೆಲ್ಲ ನಿದ್ರಿಸುತ್ತಾ,
ಕಾಣದ ಔಷದಿಯ ಹಣಕ್ಕಾಗಿ ಮತ್ತೆ ಮತ್ತೆ ಹುಡುಕುತ್ತಾ
ಚಿಕ್ಕವರೊ೦ದಿಗೆ ಪ೦ಥದಿ೦ದ ಜಗಳವಾಡುವ ತಾಯಿ
ಈಗ ಒ೦ದು ಚಿಕ್ಕಪಾಪು ತಾಯಿ!

Advertisements

Posted on December 24, 2015, in ಕವಿತೆ. Bookmark the permalink. Comments Off on ತಾಯಿ.

Comments are closed.