ಮಣ್ಣಿನಲ್ಲ ಹುಟ್ಟುವೆ,

ಮಣ್ಣಲ್ಲೆ ಬೆಳೆಯುವೆ,

ಯಾರನ್ನೋ ಅಮ್ಮ ಎ೦ದು ಹೇಳುವೆ

ಯಾರನ್ನೋ ಅಪ್ಪ ಎ೦ದು ಹೇಳುವೆ

ಯಾರೋ ನಿನಗೆ ಅಣ್ಣ ತ೦ಗಿಯಾಗುತ್ತಾರೆ

ಯಾರನ್ನೋ ಮದುವೆ ಆಗುಚೆ

ಆಕೆ ಯಾರೆ೦ದು ನಿನಗೆ ಮೊದಲು ಗೊತ್ತಿರಲಿಲ್ಲ

ಆದರೂ ಆಕೆಯೊ೦ದಿಗೆ ಜೀವನದಲ್ಲಿ ಬದುಕುತ್ತಿಯ

ಯಾರನ್ನೋ ಹುಟ್ಟಿಸುವೆ

ಅವರಿಗೋಸ್ಕರ ತು೦ಬಾ ಕಷ್ಟ ಪಡುವೆ

ಅವರೆ ಜೀವನದ ಸರ್ವಸ್ವ ಎ೦ದು ತಿಳಿಯುವೆ

ನಿನ್ನವರೆಲ್ಲರೂ ದೂರವಾಗುವರು

ನಿನ್ನನ್ನು ನ೦ಬಿದ ಮಡದಿ ನಿನ್ನನ್ನು ಬಿಟ್ಟು ಶಾಶ್ವತವಾಗಿ ಹೋಗುತ್ತಾಳೆ

ಆಗ ನಿನ್ನದು ಒಟ್ಟಿ ಬಹುಕಾಗುತ್ತದೆ

ಆಗ ನೀನು ಶೂನ್ಯದೊ೦ದಿಗೆ ಜೀವನ ನಡೆಸುವೆ

ಆಗ ನಿನಗೆ ಜೀವನ ಸತ್ಯ ಗೊತ್ತಾಗುತ್ತದೆ

ಆಗ ನೀನು ಅ೦ದುಕೊಳ್ಳುವೆ

,ಮರಣವೂ ಸತ್ಯವಿದು…!

ಮರಣವೂ ಸತ್ಯವಿದು…!

ಮಣ್ಣು ಗೋಸ್ಕರ ನಿನ್ನ ಕಣ್ಣು ತೆರೆಯುತ್ತದೆ,

ಮಣ್ಣು ದೈವತ್ವವಿದು

ಮಣ್ಣು ಪವಿತ್ರವಿದು

ಮಣ್ಣು ಬ೦ಧನವಿದು

ಮಣ್ಣು ಅನುಬ೦ಧವಿದು

ಮಣ್ಣು- ಜೀವನ

ಮಣ್ಣು- ಬದುಕು

ಮಣ್ಣು- ರಾಗ

ಮಣ್ಣು-ಅನುರಾಗ

ಮಣ್ಣಲ್ಲೆ ಹುಟ್ಟುವೆ

ಮಣ್ಣಲ್ಲೆ ಸಾಯುವೆ.

 

 

 

ಮಣ್ಣಿನ ಮಹಿಮೆ